ವಿವಾಹಿತ ಮಹಿಳೆಯ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ- ಅಸಲಿ ಕಾರಣವೇನು ಗೋತ್ತಾ

khushihost

ಮಂಗಳೂರು –
ಯುವಕನೊಬ್ಬ ವಿವಾಹಿತ ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಹೊರವಲಯದ ಸುರತ್ಕಲ್ ನಲ್ಲಿ ಈ ಒಂದು ಘಟನೆ ನಡೆದಿದೆ.39 ವಯಸ್ಸಿನ ರೇಖಾ ಎಂಬ ಮಹಿಳೆಯನ್ನು ವಸಂತ ಎಂಬುವನೇ ಕೊಲೆ ಮಾಡಿ ಕೊನೆಗೂ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೂವಿನ ವ್ಯಾಪಾರಿಯಾಗಿದ್ದ ವಸಂತ ರೇಖಾ ಎಂಆರ್ ಪಿಎಲ್ ಕಾಲನಿ ನಿವಾಸಿಯಾಗಿದ್ದು ಇಬ್ವರ ನಡುವೆ ಪರಿಚಯ ನಂತರ ಅದು ಪ್ರೇಮಕ್ಕೆ ತಿರುಗಿತ್ತು.‌ ಬಳಿಕ ವಸಂತ್ ರೇಖಾಳನ್ನು ಮದುವೆಯಾಗುವಂತೆ ಪರಿಚಯವಾದಾಗಿನಿಂದಲೂ ಸತಾಯಿಸುತ್ತಿದ್ದನಂತೆ.

ಆದರೆ ಆಕೆ ವಿವಾಹಕ್ಕೆ ಒಪ್ಪಿರಲಿಲ್ಲ.ರೇಖಾ ತನ್ನ ಗಂಡನೊಂದಿಗೆ ಸುಖವಾಗಿದ್ದಳು ತಾನಾಯಿತು ತನ್ನ ಸಂಸಾರವಾಯಿತು ಎಂದುಕೊಂಡು ಪತಿಯೊಂದಿಗೆ ಚನ್ನಾಗಿದ್ದ ವಸಂತ ಯಾವಾಗ ಪರಿಚಯವಾದನೋ ಅವಾಗಿನಿಂದ ರೇಖಾಳ ಬೆನ್ನು ಬಿದ್ದು ಮದುವೆಯಾಗುಂತೆ ಬಿಟ್ಟು ಬಿಡದೇ ಕಾಡುತ್ತಿದ್ದು.ಆದರೂ ಬೆನ್ನು ಬಿಡದ ವಸಂತ ಇಂದು ಕುಳಾಯಿ ಬಳಿ ವಸಂತ್ ಬಾಡಿಗೆ ಮನೆಗೆ ಅಲ್ಲಿಗೆ ರೇಖಾಳನ್ನು ಕರೆಸಿಕೊಂಡಿದ್ದು ಅಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಕೋಪಗೊಂಡ ವಂಸತ್‌ ಆಕೆಯನ್ನು ಕೊಲೆ ಮಾಡಿ ಬಳಿಕ ದಿಕ್ಕು ತೋಚದೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಇನ್ನೂ ಇತ್ತ ರೇಖಾ ಮನೆಯಿಂದ ನಾಪತ್ತೆಯಾಗುತ್ತಿದ್ದಂತೆ ಈ ಕುರಿತು ರೇಖಾಳ ಪತಿ ಅಶೋಕ್ ಭಂಡಾರಿ ಸುರತ್ಕಲ್ ಠಾಣೆಗೆ ಬಂದು ದೂರು ದಾಖಲಿಸಿದ್ದರು.ಇಂದು ಬೆಳಗಾಗುತ್ತಿದ್ದಂತೆ ರೇಖಾಳ ಸಾವಿನ ಅಸಲಿಯತ್ತು ಬಯಲಾಗಿದೆ. ಕುಳಾಯಿಯಲ್ಲಿರುವ ಬಾಡಿಗೆ ಮನೆಯಲ್ಲಿ ಇಬ್ಬರ ಮೃತದೇಹ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಒಳಗಿನಿಂದ ಲಾಕ್ ಆಗಿದ್ದ ಬಾಗಿಲನ್ನು ಪೊಲೀಸರು ಒಡೆದು ನೋಡಿದಾಗ ರೇಖಾಳನ್ನು ಭೀಕರವಾಗಿ ಹತ್ಯೆ ಮಾಡಿದ್ದು ಕಂಡುಬಂದಿದೆ.‌ ಸುರತ್ಕಲ್‌ನಲ್ಲಿ ಏಳೆಂಟು ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದ ವಸಂತ್ ಅಲ್ಲಿನ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ ವ್ಯಕ್ತಿ. ಅಲ್ಲಿದೆ ರೇಖಾ ನಿತ್ಯ ಹೂವು ಖರೀದಿಸಲೆಂದು ಬರುತ್ತಿದ್ದರು. ಇವರ ನಡುವೆ ಯಾವ ರೀತಿಯ ಸಂಬಂಧ ಇತ್ತು ಎನ್ನುವುದು ಅಲ್ಲಿನವರಿಗೆ ಗೊತ್ತಿಲ್ಲ. ಯಾಕಾಗಿ ಕೊಲೆ ನಡೆಸಿದ್ದಾನೆ ಎನ್ನುವ ವಿಚಾರ ಸುರತ್ಕಲ್ ನಲ್ಲಿ ಕುತೂಹಲಕ್ಕೆ ಕಾರಣವಾಗಿದೆ.ಸಧ್ಯ ದೂರು ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ರೇಖಾಳ ಸಾವು ನಿಜಕ್ಕೂ ದುರಂತವೇ ಸರಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.