ವಿನಯ ಕುಲಕರ್ಣಿ ಜಾಮೀನು ಅರ್ಜಿ ಹಿಂದೆ ಪಡೆದ ವಕೀಲರು

khushihost

ಧಾರವಾಡ –

ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಜಾಮೀನಿಗಾಗಿ ಸಲ್ಲಿಸಲಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅರ್ಜಿಯನ್ನು ವಕೀಲರು ಹಿಂದೆ ಪಡೆದಿದ್ದಾರೆ.ಜಾಮೀನು ಅರ್ಜಿಯಲ್ಲಿ ಕೆಲ ಲೋಪ ದೋಷಗಳಿರುವ ಕಾರಣ ಅರ್ಜಿಯನ್ನು ಹಿಂದೆ ಪಡೆದು ಹೊಸ ಅರ್ಜಿ ಸಲ್ಲಿಸಲು ವಿನಯ ಕುಲಕರ್ಣಿ ಪರ ವಕೀಲರು ನಿರ್ಧರಿಸಿದ್ದಾರೆ.ಈಗಾಗಲೇ ಸಿಬಿಐ ಅಧಿಕಾರಿಗಳಿಂದ ಬಂಧನವಾಗಿದ್ದಾರೆ ಮಾಜಿ ಸಚಿವ ವಿನಯ ಕುಲಕರ್ಣಿ.ಇವರ ಜಾಮೀನು ಅರ್ಜಿಯನ್ನ, ವಿನಯ ಕುಲಕರ್ಣಿ ಪರ ವಕೀಲರು ಮರಳಿ ಪಡೆದಿದ್ದು ಕುತೂಹಲ ಮೂಡಿಸಿದೆ.ಕಳೆದ ಹದಿನೈದು ದಿನಗಳ ಹಿಂದೆ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಯರ ಜಾಮೀನು ಅರ್ಜಿಯ ನಿನ್ನೆ ವಿಚಾರಣೆ ಮಾಡಿ ಇಂದಿಗೆ ಮುಂದೂಡಲಾಗಿತ್ತು.

ಇವತ್ತು ಮತ್ತೆ ಇನ್ನೇನು ಜಾಮೀನು ಅರ್ಜಿ ವಿಚಾರಣೆ ನಡೆಯುತ್ತದೆ ಎನ್ನುವಷ್ಟರ ವೇಳೆ, ವಿನಯ ಕುಲಕರ್ಣಿ ಪರ ವಕೀಲರು, ತಾವು ಹಾಕಿದ್ದ ಜಾಮೀನು ಅರ್ಜಿಯನ್ನ ಮರಳಿ ಪಡೆದಿದ್ದಾರೆ.ಧಾರವಾಡ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಾಪಸ್ ಪಡೆದಿದ್ದರಿಂದ ಸಿಬಿಐ ಯಾವುದೇ ರೀತಿಯ ತಕಾರಾರು ಹಾಕದೇ ಮರಳಿದ್ದಾರೆ‌.ಇನ್ನೂ ವಿನಯ ಕುಲಕರ್ಣಿ ಪರವಾಗಿ ಜಾಮೀನು ಅರ್ಜಿಯ ಸಂಬಂಧ ಇಂದಿನ ವಿಚಾರಣೆಯ ಕಾಲಕ್ಕೆ ಸೋಜಿಗ ಮೂಡಿಸುವಂತ ಬೆಳವಣಿಗೆ ನಡೆದಿದ್ದು, ಮತ್ತೆ ಹೊಸದಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.ಈಗಾಗಲೇ ಇದೇ ತಿಂಗಳ 23ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಮಾಜಿ ಸಚಿವ ವಿನಯ ಕುಲಕರ್ಣಿಯವರು ಹಿಂಡಲಗಾ ಜೈಲಿನಲ್ಲಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.