ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದೆ ಯಲಿಗಾರ ಕುಟುಂಬದವರು – ಯರಗಟ್ಟಿ ಮುನವಳ್ಳಿ ಬ್ಲಾಕ್ ಯುವ ಘಟಕದ ಅಧ್ಯಕ್ಷ ಯಶವಂತನ ಕಣ್ಣುಗಳನ್ನು ದಾನ ಮಾಡಿ ಮತ್ತೊಬ್ಬರಿಗೆ ಬೆಳಕಾಗಿ ಸಾರ್ಥಕತೆ ಮೆರೆದ ಯಲಿಗಾರ ಬಂಧುಗಳು

khushihost
ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದೆ ಯಲಿಗಾರ ಕುಟುಂಬದವರು – ಯರಗಟ್ಟಿ ಮುನವಳ್ಳಿ ಬ್ಲಾಕ್ ಯುವ ಘಟಕದ ಅಧ್ಯಕ್ಷ ಯಶವಂತನ ಕಣ್ಣುಗಳನ್ನು ದಾನ ಮಾಡಿ ಮತ್ತೊಬ್ಬರಿಗೆ ಬೆಳಕಾಗಿ ಸಾರ್ಥಕತೆ ಮೆರೆದ ಯಲಿಗಾರ ಬಂಧುಗಳು

ಮುನವಳ್ಳಿ

 

ಹೌದು ಧಾರವಾಡದ ಅಮ್ಮಿನಬಾವಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿತ್ತು.ಈ ಒಂದು ಅಪಘಾತದಲ್ಲಿ ಯಶವಂತ ಸೋಮಶೇಖರ ಯಲಿಗಾರ ಸ್ಥಳದಲ್ಲಿಯೇ ಮೃತರಾಗಿದ್ದಾರೆ .ಬೆಳಗಾವಿ ಜಿಲ್ಲೆಯ ಮುನವಳ್ಳಿ ಗ್ರಾಮದ ನಿವಾಸಿಯಾಗಿದ್ದ  ಇವರು ಯರಗಟ್ಟಿ ಮುನವಳ್ಳಿ ಬ್ಲಾಕ್ ಯೂಥ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷಕರಾಗಿದ್ದರು ಪಕ್ಷ ಸಂಘಟನೆ ಸೇರಿದಂತೆ ಸಾಕಷ್ಟು ಜನಪರ ಕೆಲಸ ಕಾರ್ಯಗಳನ್ನು ಮಾಡಿ ಹೆಸರನ್ನು ಮಾಡಿದ್ದ ಯಶವಂತ ಇವರು ಕೆಲಸದ ನಿಮಿತ್ಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಕಾರು ಅಪಘಾತವಾಗಿದೆ

 

ಅಪಘಾತದಲ್ಲಿ 27 ವಯಸ್ಸಿನ ಯಶವಂತ ಸ್ಥಳದಲ್ಲೇ ಮೃತರಾಗಿರುವ ಹಿನ್ನಲೆಯಲ್ಲಿ ಸ್ಥಳಕ್ಕೇ ಆಗಮಿಸಿದ ಯಶವಂತನ ಕುಟುಂಬದವರು ಮಗನ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದು ಮತ್ತೊಬ್ಬರ ಬಾಳಿಗೆ ಬೆಳಕಾಗಿದ್ದಾರೆ.ಮಗ ನ ಕಣ್ಣುಗಳನ್ನು ದಾನ ಮಾಡಿ ಮತ್ತೊಬ್ಬರ ಬಾಳಿಗೆ ಬೆಳಕಾಗಿ ಮಾದರಿಯಾಗಿದ್ದಾರೆ.

 

ಯಶವಂತನ ಎರಡು ಕಣ್ಣುಗಳನ್ನು ಎಮ್ ಎಮ್ ಜೋಶಿ ಆಸ್ಪತ್ರೆಗೆ ದಾನವನ್ನು ಮಾಡುವ ಮೂಲಕ ಮತ್ತೊಬ್ಬರ ಬದುಕಿಗೆ ಬೆಳಕಾಗುವ ಮೂಲಕ ಅಪಘಾತದಲ್ಲಿ ಕಳೆದುಕೊಂಡ ಮಗ ನನ್ನು ಮತ್ತೊಬ್ಬರಿಗೆ ನೀಡಿ ಆ ಬೆಳಕಿನ ಮೂಲಕ ತಮ್ಮ ಮಗನನ್ನು ನೋಡಲು ಮುಂದಾಗಿದ್ದಾರೆ. ಪ್ರತಿಯೊಂದರಲ್ಲೂ ತುಂಬಾ ವಿಶೇಷವಾಗಿರುವ ಪ್ರತಿಷ್ಠಿತ ಮುನವಳ್ಳಿಯಲ್ಲಿನ ಯಲಿಗಾರ ಕುಟುಂಬದವರು ಈಗ ಮತ್ತೊಂದು ದುಖಃದ ವಿಚಾರದಲ್ಲೂ ಕೂಡಾ ಸಾರ್ಥಕತೆ ಮೆರೆದು ರಾಜ್ಯಕ್ಕೆ ಮಾದರಿಯಾಗಿದ್ದಾರೆ.

 

ಅಪಘಾತದಲ್ಲಿ ಮಗನನ್ನು ಈಗಾಗಲೇ ಕಳೆದುಕೊಂಡಿರುವ ಯಶವಂತನ ಪರಿವಾರ ದವರು ಈಗ ದುಖಃದ ನಡುವೆಯೂ ನೇತ್ರದಾನ ಮಹಾದಾನ ಎನ್ನುವ ಮಾತಿಗೆ ಪ್ರೇರಣೆಯಾಗಿ ಮಗನ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದು ಮಾದರಿಯಾಗಿದ್ದಾರೆ.ಇನ್ನೂ ಯಶವಂತನ ನಿಧನಕ್ಕೆ ಸಮಸ್ತ ಮುನವಳ್ಳಿ ಪಟ್ಟಣದ ನಿವಾಸಿ ಗಳು ಯಲಿಗಾರ ಬಂಧುಗಳು ಸಂತಾಪವನ್ನು ಸೂಚಿಸಿದ್ದಾರೆ.

 

ರವಿ ಭೂಪಾಲಪ್ಪ ಯಲಿಗಾರ.ಸೋಮಶೇಖರ ಯಲಿಗಾರ,ನಾಗಪ್ಪ ಯಲಿಗಾರ,ಅಂಬರೀಶ ಯಲಿಗಾರ,ಭೀಮು ಯಲಿಗಾರ,ಮಹೇಶ ಯಲಿಗಾರ,ಪ್ರಮೋದ ಯಲಿಗಾರ,ಪ್ರಭಾಕರ ಯಲಿಗಾರ,ಪ್ರಮೀಣ ಯಲಿಗಾರ,ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.ಇನ್ನೂ ಇವರೊಂದಿಗೆ ಅಕ್ಷಯ ಕಡಕೋಳ ಪ್ರಯಾಣಿಸು ತ್ತಿದ್ದರು ಇವರು ಕೂಡಾ ಮೃತರಾಗಿದ್ದಾರೆ.ಮೃತರ ಅಂತ್ಯಕ್ರಿಯೆ ಮುನವಳ್ಳಿ ಪಟ್ಟಣದಲ್ಲಿ ನಡೆಯ ಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.