ಹುಬ್ಬಳ್ಳಿ –
ಪೊಲೀಸ್ ಇಲಾಖೆಗೆ ಹೊಸ ವಾಹನ ಹಸ್ತಾಂತರ ಮಾಡಿದ ಶಾಸಕ ಪ್ರಸಾದ್ ಅಬ್ಬಯ್ಯ – ಇಲಾಖೆಯ ಮನವಿಗೆ ಸ್ಪಂದಿಸಿದ ಶಾಸಕರು ಇಲಾಖೆಗೆ ವಾಹನ ಹಸ್ತಾಂತರ…..
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಯದ ವ್ಯಾಪ್ತಿಯಲ್ಲಿನ ಪೊಲೀಸ್ ಇಲಾಖೆಗೆ ವಾಹನ ಖರೀದಿ ಮಾಡಲು ಅನುದಾನದ ಬೇಡಿಕೆ ಮಾಡಲಾಗುತ್ತಿದೆ. ಇತ್ತೀಚಿಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹಳೆಯ ವಾಹನಗಳನ್ನು ತಗೆಯುವಂತೆ ಆದೇಶದ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಗೆ ಸಮಸ್ಯೆಯಾಗಿದ್ದು ಈ ಒಂದು ಹಿನ್ನಲೆಯಲ್ಲಿ ವಾಹನ ಗಳನ್ನು ಖರೀದಿ ಮಾಡಲು ಅನುದಾನವನ್ನು ನೀಡು ವಂತೆ ನಗರ ಸಶಸ್ತ್ರ ಮೀಸಲು ಪಡೆಯ ಮೀಸಲು ಪಡೆಯ RPI ನಾಗರಾಜ ಪಾಟೀಲ್ ಅವರು ಹುಬ್ಬಳ್ಳಿ ಧಾರವಾಡದ ಹಲವು ಜನಪ್ರತಿನಿಧಿಗಳಿಗೆ ಮನವಿ ಯನ್ನು ನೀಡಿದ್ದರು.
ಈ ಒಂದು ಮನವಿಗೆ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಕೋಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾಗಿರುವ ಪ್ರಸಾದ್ ಅಬ್ಬಯ್ಯ ಅವರು ತಮ್ಮ ಅನುದಾನದಲ್ಲಿ ಪೊಲೀಸ್ ಇಲಾಖೆಗೆ ಹೊಸ ವಾಹನವನ್ನು ಹಸ್ತಾಂತರ ಮಾಡಿದರು.ಮನವಿಯನ್ನು ಸ್ವೀಕಾರ ಮಾಡಿ ಕೆಲವೆ ದಿನಗಳಲ್ಲಿ ಮನವಿಗೆ ಸ್ಪಂದಿಸಿ ಹೊಸ ವಾಹನವನ್ನು ಹಸ್ತಾಂತರ ಮಾಡಿದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಡಿಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನ ರೇಟ್ ಗೆ ಹೊಸ ಬೊಲೆರೋ ವಾಹನವನ್ನು ಹಸ್ತಾಂತರ ವನ್ನು ಮಾಡಲಾಯಿತು.ಡಿಸಿಪಿ ಪೊಲೀಸ್ ಅಧಿಕಾರಿ ಗಳಾದ ರವೀಶ್ ಸಿಆರ್,ಮಹಾನಿಂಗ ನಂದಗಾವಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
- ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..



