ಧಾರವಾಡ –
ಮಾರುಕಟ್ಟೆಗೆ ಕಾಲಿಟ್ಟ Big Mishra ನೀರು – ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುತ್ತಿದೆ ಸಂಜಯ ಮಿಶ್ರಾ ಮಾಲೀಕತ್ವದ ವಾಟರ್ ಬಾಟಲ್…..
ಧಾರವಾಡ ಪೇಢಾ ದೊಂದಿಗೆ ವ್ಯಾಪಾರ ವಹಿವಾಟು ಆರಂಭ ಮಾಡಿರುವ ಸಂಜಯ ಮಿಶ್ರಾ ಅವರು ದಿನದಿಂದ ದಿನಕ್ಕೆ ತಮ್ಮದೇಯಾದ ಸಾಮ್ರಾಜ್ಯವನ್ನು ವಿಸ್ತರಣೆ ಮಾಡ್ತಾ ಇದ್ದಾರೆ.ಪೇಢಾ ಸೇರಿದಂತೆ ಕೆಲವೊಂದಿಷ್ಟು ತಿಂಡಿ ತಿನಿಸುಗಳಿಗೆ ಮಾತ್ರ ಸಿಮೀತ ವಾಗಿದ್ದ ಸಂಜಯ ಮಿಶ್ರಾ ಮಾಲೀಕತ್ವದ ಈ ಒಂದು ಬಿಗ್ ಮಿಶ್ರಾ ಸಂಸ್ಥೆ ಸಧ್ಯ ಹೊಟೇಲ್ ಉಧ್ಯಮಕ್ಕೂ ಕಾಲಿಟ್ಟಿದ್ದು
ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯದ ಹಲವೆಡೆ ಮತ್ತು ಬೇರೆ ಬೇರೆ ರಾಜ್ಯಗಳಲ್ಲೂ ಕೂಡಾ ಹೊಟೇಲ್ ಗಳು ಆರಂಭವಾಗಿದ್ದು ಗ್ರಾಹಕರ ಗಮನ ಸೆಳೆಯುತ್ತಿದ್ದು ಇದರ ನಡುವೆ ಸಧ್ಯ ಬಿಗ್ ಮಿಶ್ರಾ ಸಂಸ್ಥೆ ನೀರಿನ ಉತ್ಪಾದನೆಯನ್ನು ಆರಂಭ ಮಾಡಿದ್ದು ಮಾರುಕಟ್ಟೆ ಯಲ್ಲಿ ಬಿಗ್ ಮಿಶ್ರಾ ಸಂಸ್ಥೆಯ ವಾಟರ್ ಬಾಟಲ್ ಗಮನ ಸೆಳೆಯುತ್ತಿದೆ.ಆಕರ್ಷಣೆಯ ಕೆಂಪು ಬಣ್ಣದ ವಾಟರ್ ಬಾಟಲ್ ಸಧ್ಯ ಎಲ್ಲಿ ನೋಡಿದಲ್ಲಿ ಕಂಡು ಬರುತ್ತಿದೆ
ಈಗಾಗಲೇ ಸಿಹಿ ತಿಂಡಿ ತಿನಿಸುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿರುವ ಸಂಜಯ ಮಿಶ್ರಾ ಅವರು ಸಧ್ಯ ಮತ್ತೊಂದು ಉತ್ಪಾದನೆಯನ್ನು ಆರಂಭ ಮಾಡಿದ್ದು ಗ್ರಾಹಕರನ್ನು ಕೆಂಪು ಬಣ್ಣದ ವಾಟರ್ ಬಾಟಲ್ ಗಳು ಗಮನ ಸೆಳೆಯುತ್ತಿದ್ದು ಉಳಿದ ಕಂಪನಿಗಳ ವಾಟರ್ ಬಾಟಲ್ ಗಳನ್ನು ನೋಡಿದರೆ ಈ ಒಂದು ಬಿಗ್ ಮಿಶ್ರಾ ನೀರು ಉಳಿದವುಗಳಿಗಿಂತ ಆಕರ್ಷಣೆಯಾಗಿದ್ದು
ಬಿಗ್ ಮಿಶ್ರಾ ವಾಟರ್ ಬಾಟಲ್ ಗಳು ಮಾರುಕಟ್ಟೆ ಯಲ್ಲಿ ಎಲ್ಲೇಂದರಲ್ಲಿ ರಾರಾಜಿಸುತ್ತಿವೆ ಎಲ್ಲಾ ಕಂಪನಿ ಗಳಿಗೆ ಠಕ್ಕರ್ ಕೊಟ್ಟಿರುವ ಸಂಜಯ ಮಿಶ್ರಾ ಮಾಲೀಕತ್ವದ ವಾಟರ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..



