ಇಂದು JSS ಸಂಸ್ಥೆಯ ಮತ್ತೊಂದು ITI ಉದ್ಘಾಟನೆ ಮತ್ತು ನಾಮಕರಣ ಸಮಾರಂಭ – ರಾಜ್ಯಸಭಾ ಸದಸ್ಯರು ಧರ್ಮಾಧಿಕಾರಿ ಡಾ ವಿರೇಂದ್ರ ಹೆಗ್ಗಡೆ,ಶಾಸಕ ಅಮೃತ ದೇಸಾಯಿ ಸೇರಿದಂತೆ ಹಲವು ಗಣ್ಯರು ಭಾಗಿ

khushihost
ಇಂದು JSS ಸಂಸ್ಥೆಯ ಮತ್ತೊಂದು ITI ಉದ್ಘಾಟನೆ ಮತ್ತು ನಾಮಕರಣ ಸಮಾರಂಭ – ರಾಜ್ಯಸಭಾ ಸದಸ್ಯರು ಧರ್ಮಾಧಿಕಾರಿ ಡಾ ವಿರೇಂದ್ರ ಹೆಗ್ಗಡೆ,ಶಾಸಕ ಅಮೃತ ದೇಸಾಯಿ ಸೇರಿದಂತೆ ಹಲವು ಗಣ್ಯರು ಭಾಗಿ

ಧಾರವಾಡ

 

ಧಾರವಾಡದ ಪ್ರತಿಷ್ಠಿತ ಜೆಎಸ್ ಎಸ್ ಶಿಕ್ಷಣ ಸಂಸ್ಥೆಯ ಮತ್ತೊಂದು ಐಟಿಐ ಕಾಲೇಜು ಉದ್ಘಾಟನೆ ಮತ್ತು ನಾಮಕರಣ ಸಮಾರಂಭ ಧಾರವಾಡದಲ್ಲಿ ಇಂದು ನಡೆಯಲಿದೆ.ಹೌದು ನಗರದ ಸವದತ್ತಿ ರಸ್ತೆಯಲ್ಲಿರುವ ಸಂಸ್ಥೆಯ ಆವರಣದಲ್ಲಿ ಈ ಒಂದು ಕಾರ್ಯಕ್ರಮವು ನಡೆಯಲಿದ್ದು ಮುರುಘಾಮಠದ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಈ ಒಂದು ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾಗಿರುವ ಡಾ ವಿರೇಂದ್ರ ಹೆಗ್ಗಡೆ ಲೋಕಾರ್ಪಣೆಯನ್ನು ಮಾಡಲಿದ್ದಾರೆ.

 

 

ಮುಖ್ಯ ಅತಿಥಿಗಳಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ,ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ,ಕನಕೂರ ಗ್ರಾಮ ಪಂಚಾಯತ ಅಧ್ಯಕ್ಷರಾಗಿರುವ ಶ್ರೀಮತಿ ರೇಣುಕಾ ಎಸ್ ಅರೇನ್ನವರ,ಜಂಟಿ ನಿರ್ದೇಶಕರು ಉದ್ಯೋಗ ಮತ್ತು ತರಬೇತಿ ಇಲಾಖೆಯ ಪಿ ರಮೇಶ ಸೇರಿದಂತೆ ಹಲವು ಗಣ್ಯರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಸರ್ವರಿಗೂ ಸ್ವಾಗತ ಸುಸ್ವಾಗತ ಎಂದು ಜೆಎಸ್ಎಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ ಅಜಿತ್ ಪ್ರಸಾದ್ ಮತ್ತು ಸಂಸ್ಥೆಯ ಐಟಿಐ ಕಾಲೇಜಿನ ಪ್ರಾಚಾರ್ಯರಾಗಿರುವ ಮಹಾವೀರ ಉಪಾದ್ಯಾಯ ಅವರು ಕೋರಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.